ಅರ್ಕಿ ಅರಮನೆಯು ಭಾರತದ ಹಿಮಾಚಲ ಪ್ರದೇಶದ ಅರ್ಕಿ ಪಟ್ಟಣದಲ್ಲಿದೆ. ಅರ್ಕಿ ಅರಮನೆಯನ್ನು ೧೬೯೫ - ೧೭೦೦ ರ ನಡುವೆ ರಾಣಾ ಸಭಾ ಚಂದ್ ಅವರ ವಂಶಸ್ಥರಾದ ರಾಣಾ ಪೃಥ್ವಿ ಸಿಂಗ್ ನಿರ್ಮಿಸಿದರು. ೧೮೦೬ ರಲ್ಲಿ ಕೋಟೆಯನ್ನು ಗೂರ್ಖಾಗಳು ವಶಪಡಿಸಿಕೊಂಡರು. ಬಾಗಲ್‌ನ ದೊರೆ ರಾಣಾ ಜಗತ್ ಸಿಂಗ್ ನಲಗಢದಲ್ಲಿ ಆಶ್ರಯ ಪಡೆಯಬೇಕಾಯಿತು. ೧೮೦೬ - ೧೮೧೫ ರ ಈ ಅವಧಿಯಲ್ಲಿ, ಗೂರ್ಖಾ ಜನರಲ್ ಅಮರ್ ಸಿಂಗ್ ಥಾಪಾ ಅವರು ಹಿಮಾಚಲ ಪ್ರದೇಶಕ್ಕೆ ಕಂಗ್ರಾದವರೆಗೆ ಮತ್ತಷ್ಟು ಪ್ರಗತಿ ಸಾಧಿಸಲು ಅರ್ಕಿಯನ್ನು ತನ್ನ ಭದ್ರಕೋಟೆಯಾಗಿ ಬಳಸಿಕೊಂಡರು. ಅರ್ಕಿಯು ರಾಣಾ ಅಜಯ್ ದೇವ್, ಪನ್ವಾರ್ ರಜಪೂತರಿಂದ ಸ್ಥಾಪಿಸಲ್ಪಟ್ಟ ಬಾಗಲ್‌ನ ರಾಜಪ್ರಭುತ್ವದ ಬೆಟ್ಟದ ರಾಜ್ಯದ ರಾಜಧಾನಿಯಾಗಿತ್ತು. ರಾಜ್ಯವನ್ನು ೧೬೪೩ ರ ಸುಮಾರಿಗೆ ಸ್ಥಾಪಿಸಲಾಯಿತು. == ವಸತಿ ಮತ್ತು ವಿಶ್ರಾಂತಿ ಗೃಹ == ಅರ್ಕಿಯಲ್ಲಿ ಒಂದು ಪಿಡಬ್ಲ್ಯೂಡಿ ವಿಶ್ರಾಂತಿ ನಿಲಯ ಮತ್ತು ಒಂದು ಅರಣ್ಯ ಇಲಾಖೆಯ ವಿಶ್ರಾಂತಿ ವಸತಿ ನಿಲಯದ ಜೊತೆಗೆ ಕೆಲವು ಖಾಸಗಿ ಹೋಟೆಲ್‌ಗಳು ಇದ್ದಾವೆ. == ಚಿತ್ರಗಳು == == ಉಲ್ಲೇಖಗಳು ==